← Back to home
ಶುಭಕರ ಸುಂದರ ನಿನ್ನ ದರುಶನ
Author: ಸ್ವಾಮಿ ಪುರುಷೋತ್ತಮಾನಂದCategory: ಶ್ರೀರಾಮಕೃಷ್ಣRaaga: ಭೈರವೀTaala: ತ್ರಿತಾಲ
ॐ
ಶುಭಕರ ಸುಂದರ ನಿನ್ನ ದರುಶನ
ಶೋಭಿಸುತಿದೆ ಕರುಣಾರುಣ ವದನ ||
ನಾನಾ ಭಾವ ಸುಧಾರ್ಣವ ನೀನು
ನಾನಾ ಯೋಗ ಸಮಾಗಮ ನೀನು ||
ಕಮಲಾನನ ಕಮಲದಳನಯನ
ಕಲಿಮಲಹರಣ ಸಿರಿ ರಾಮಕೃಷ್ಣ
ರಸಮಯ ನಿನ್ನ ಸುಮಧುರ ವಚನ
ಮನ ತಣಿಸುವ ಮಲಯಾಚಲ ಪವನ
ರಾಮಕೃಷ್ಣ ಜಯ ಜಯ ಧ್ವನಿ ತಾನ
ಪ್ರೇಮಾನಂದ ಮನೋಹರ ಗಾನ ||
Thoughts & Reflections
0No reflections shared yet. Be the first to share your thoughts!