← Back to home
ಬಾರೆಲೊ ಸ್ವಾಮಿ ಬಾರೈ ಪ್ರಭುವೆ
Author: ಸ್ವಾಮಿ ಶಾಸ್ತ್ರಾನಂದCategory: ಶ್ರೀರಾಮಕೃಷ್ಣRaaga: ಬಾಗೇಶ್ರೀTaala: ತ್ರಿತಾಲ
ॐ
ಬಾರೆಲೊ ಸ್ವಾಮಿ ಬಾರೈ ಪ್ರಭುವೆ
ಬಾರೈ ಎನ್ನಯ ಶ್ರೀಗುರುದೇವನೆ ॥
ಮಾತಿಗೆ ಸಿಲುಕದ ಮನಸಿಗೂ ನಿಲುಕದ
ನೂತನ ರೀತಿಯ ಪರ ಅವತಾರೀ
ಕನಸಲು ಕಾಮವು ಸುಳಿಯದ ಮನವು
ಕನಕದ ಸೋಂಕನು ಸಹಿಸದ ತನುವು ॥
ನಿರತವು ಪರದೆಡೆ ಧಾವಿಸಿ ಏರುವ
ಶ್ರಮದಿಂ ಧರೆಯೆಡೆ ಇಳಿಯುವ ಮನವು
ಸರಸಕು ಸಟೆಯನು ನುಡಿಯದ ರಸನವು
ಪರಹಿತಕಾಗಿಯೆ ಧರಿಸಿದ ಜನುಮವು ॥
ಈ ಪರಿ ಮಹಿಮೆಯ ನಿನ್ನನು ಉಳಿದು
ಬೇರಾರೆನ್ನಯ ತಾರಕ ದೇವನು
ನಿನ್ನಯ ಒಲವು ದಯೆಗಳು ಇರಲು
ಅನ್ಯವದೇತಕೊ ಧನ್ಯನು ನಾನು ॥
Thoughts & Reflections
0No reflections shared yet. Be the first to share your thoughts!