← Back to home
ಬೋಧವೊಂದೇ ಬ್ರಹ್ಮನಾದವೊಂದೇ
Author: ಶಿಶುನಾಳ ಷರೀಫ್Category: ಶ್ರೀಕೃಷ್ಣRaaga: ಜೋಗಿಯಾTaala: ತೇವಾರಾ
ॐ
ಬೋಧವೊಂದೇ ಬ್ರಹ್ಮನಾದವೊಂದೇ
ಸಾಧನ ಮಾಡುವ ಹಾದಿ ಒಂದೇ
ಆದಿ ಪಥ ಒಂದೇ ॥
ಬಿಂದು ಒಂದೇ ನಿಜಾನಂದ ಒಂದೇ
ತಂದೆ ಸದ್ಗುರು ಗೋವಿಂದ ಒಂದೇ
ಅಂದಿಗಿಂದಿಗೊಂದೇ ॥
ದೋಷ ಒಂದೇ ನಿರ್ದೋಷ ಒಂದೇ
ಶಿಶುನಾಳಾಧೀಶನ ಭಾಷೆ ಒಂದೇ
ಭವನಾಶ ಒಂದೇ ॥
Thoughts & Reflections
0No reflections shared yet. Be the first to share your thoughts!