← Back to home
ಗಿರಿಯಲ್ಲದೇ ಹುಲ್ಲು ಮರಡಿಯಲಾಡುವುದೇ
Author: ಅಕ್ಕಮಹಾದೇವಿCategory: ಶ್ರೀಶಿವRaaga: ಪಹಾಡೀTaala: ತ್ರಿತಾಲ್
ॐ
ಗಿರಿಯಲ್ಲದೇ ಹುಲ್ಲು ಮರಡಿಯಲಾಡುವುದೇ ನವಿಲು
ಕೊಳನಲ್ಲದೆ ಕಿರಿವೆಳ್ಳಕೆಳೆಸುವುದೇ ಹಂಸೆ
ಮಾಮರ ತಳಿತಲ್ಲದೆ ಸ್ವರಗೈವುದೇ ಕೋಗಿಲೆ ॥
ಪರಿಮಳವಿಲ್ಲದ ಪುಷ್ಪಕೆಳಸುವುದೇ ಭ್ರಮರ
ಎನ್ನದೇವ ಚೆನ್ನಮಲ್ಲಿಕಾರ್ಜುನನಲ್ಲದೆ
ಅನ್ನಕ್ಕೆಳಸುವುದೇ ಎನ್ನ ಮನ
ಕೇಳಿರೇ ಕೆಳದಿಯರಿರಾ ॥
Thoughts & Reflections
0No reflections shared yet. Be the first to share your thoughts!