← Back to home
ಒಲೆ ಹತ್ತಿ ಉರಿದಡೆ ನಿಲ್ಲಬಹುದಲ್ಲದೆ
Author: ಬಸವಣ್ಣCategory: ಶ್ರೀಶಿವRaaga: ಹಿಂದೂಸ್ತಾನಿ ಕಾಫಿTaala: ಆದಿತಾಳ
ॐ
ಒಲೆ ಹತ್ತಿ ಉರಿದಡೆ ನಿಲ್ಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲ್ಲಬಹುದೆ ॥
ಏರಿ ನೀರುಂಬಡೆ, ಬೇಲಿ ಹೊಲ ಮೇವಡೆ,
ನಾರಿ ತನ್ನ ಮನೆಯಲ್ಲಿ ಕಳುವಡೆ, '
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ನಾ ದೂರಲೊ ದೇವ
ಕೂಡಲ ಸಂಗಮದೇವಾ ॥
Thoughts & Reflections
0No reflections shared yet. Be the first to share your thoughts!