Bhasaka
← Back to home

ಶ್ರೀ ಪತಿಯು ನಮಗೆ

Author: ಪುರಂದರದಾಸCategory: ಶ್ರೀಕೃಷ್ಣRaaga: ತಿಲಂಗ್Taala: ಝಪತಾಲ
ಶ್ರೀಪತಿಯು ನಮಗೆ ಸಂಪದವೀಯಲಿ ವಾಣೀಪತಿಯು ನಮಗೆ ದೀರ್ಘಾಯು ಕೊಡಲಿ || ವರವಿಬುಧರನು ಪೊರೆಯೆ ವಿಷವ ಕಂಠದಲಿಟ್ಟ ಹರ ನಿತ್ಯ ನಮಗೆ ರಕ್ಷಣೆ ನೀಡಲಿ | ನರರೊಳುನ್ನತವಾದ ನಿತ್ಯ ಭೋಗಂಗಳನು ಪುರುಹೂತ ದಯದಿಂದ ಪೂರ್ಣಮಾಡಿಸಲಿ || ವಿನುತಸಿದ್ಧಿಪ್ರದನು ವಿಘ್ನೇಶ ದಯದಿಂದ ನೆನೆದ ಕಾರ್ಯಗಳ ನೆರೆವೇರಿಸಲಿ ಹರಸಿ | ದಿನದಿನವು ಧನ್ವಂತ್ರಿಯಾಪತ್ತುಗಳ ಕಳೆದು ಮನಹರುಷವಿತ್ತು ಮನ್ನಿಸಲಿ ಬಿಡದೆ || ನಿರುತ ಸುಜ್ಞಾನವನು ಬೆಳಗಿ ಕೃಪೆಗೈಯುವ ಗುರುಗಳಾಶೀರ್ವಾದ ನಮಗಾಗಲಿ | ಪುರಂದರವಿಟ್ಠಲನ ಕರುಣದಿಂದಲಿ ಸಕಲ ಸುರರೊಲುಮೆ ನಮಗೆ ಸುಸ್ಥಿರವಾಗಲಿ ||

Thoughts & Reflections

0

No reflections shared yet. Be the first to share your thoughts!

Share your thought