Bhasaka
← Back to home

ಸುಮ್ಮನೆ ದೊರಕುವುದೇ ಶ್ರೀರಾಮನ ದಿವ್ಯನಾಮವು

Author: ಪುರಂದರದಾಸCategory: ಶ್ರೀರಾಮRaaga: ಶಂಕರಾಭರಣTaala: ಮಿಶ್ರಛಾಪುತಾಳ
ಸುಮ್ಮನೆ ದೊರಕುವುದೇ ಶ್ರೀರಾಮನ ದಿವ್ಯನಾಮವು | ಜನ್ಮಜನ್ಮಾಂತರದ ದುಷ್ಕರ್ಮ ಹೋದವಗಲ್ಲದೆ ॥ ' ಭಕ್ತಿರಸದಲಿ ತನ್ನ ಚಿತ್ತಪರವಶವಾಗಿ ಅಚ್ಚುತನ ನಾಮವ ಬಚ್ಚಿಟ್ಟುಕೊಂಡವಗಲ್ಲದೆ ॥ ಸೀತಾರಾಮನ ದಿವ್ಯನಾಮವ ಅಂತರಂಗದೊಳಿಟ್ಟು ಚಿಂತೆಯೆಲ್ಲ ಬಿಟ್ಟು ನಿಶ್ಚಿಂತನಾದವಗಲ್ಲದೆ ॥ ಕಣ್ಣೊಳಗಿದ್ದ ಮೂರುತಿ ತನ್ನೊಳಗೆ ತಂದು ಘನ್ನಪೂರ್ಣ ಪುರಂದರ ವಿಟ್ಠಲರಾಯನ ಭಜಿಸಿದಲ್ಲದೆ ॥

Thoughts & Reflections

0

No reflections shared yet. Be the first to share your thoughts!

Share your thought