← Back to home
ಶ್ರೀ ರಾಮಕೃಷ್ಣಪ್ರಭೋ ದೇವ
Author: ಸ್ವಾಮಿ ಹರ್ಷಾನಂದCategory: ಶ್ರೀರಾಮಕೃಷ್ಣRaaga: ದುರ್ಗಾTaala: ತ್ರಿತಾಲ
ॐ
ಶ್ರೀರಾಮಕೃಷ್ಣಪ್ರಭೋ ದೇವ || ಪ ||
ಆರತಿಯೆತ್ತುವೆ ಹರಿಹರಬ್ರಹ್ಮನೆ || ಅ.ಪ. ||
ಭವಬಂಧನವನು ಖಂಡಿಸುವವನೆ
ನವನವ ರೂಪಧರ ||
ಭಕುತರ ಪ್ರೇಮಕೆ ಮಣಿದರು ನಲಿದರು
ನಿಷ್ಕಲ ನಿರುಪಮನೆ ||
ಸಂಪದ ರಾಜಪದ ಇಂದ್ರಪದ ಈಯದೆ
ಶ್ರೀಪದ ಕೊಡು ಹರಿಯೇ ||
ಹೃದಯಕಮಲದಲಿ ಸತತವು ನೆಲಸುತ
ಮೋದವ ಸುರಿಸು ಗುರೋ ||
Thoughts & Reflections
0No reflections shared yet. Be the first to share your thoughts!