Bhasaka
← Back to home

ಉಬ್ಬದಿರು ಉಬ್ಬದಿರು

Author: ಪುರಂದರದಾಸCategory: ಶ್ರೀಕೃಷ್ಣRaaga: ಮಾಲಕೌಂಸ್Taala: ಝಪತಾಲ
ಉಬ್ಬದಿರು ಉಬ್ಬದಿರು ಎಲೆ ಮಾನವ | ಹೆಬ್ಬುಲಿಯಂತೆ ಯಮ ಬೊಬ್ಬಿಡುತ ಕಾದಿರುವ || ಸಾಗರದ ತೆರೆಯಂತೆ ಸಾವು ಹುಟ್ಟಿರಲಾಗಿ ಭೋಗಭಾಗ್ಯಗಳೆಂದು ಬಳಲಲೇಕೋ | ನಾಗಹೆಡೆ ನೆರಳಲ್ಲಿ ನಡುಗೋ ಕಪ್ಪೆಯ ತೆರದಿ ಕೂಗಿ ಚೀರಿದರೆ ನಿನ್ನಾಗ ಕೇಳುವರೆ || ಮಾಳಿಗೆ ಮನೆಯೆಂದು ಮತ್ತೆ ಸತಿಸುತರೆಂದು ಜಾಳಿಗೆ ಧನಧಾನ್ಯ ಪಶುಗಳೆಂದು | ವೇಳೆ ತಪ್ಪದೆ ತಿಂಬ ಕೂಳು ತನಗುಂಟೆಂದು ಗಾಳಿಗೊಡ್ಡಿದ ದೀಪ ಬದುಕು ಬಯಲು || ಅಸ್ಥಿರದ ಭವದೊಳಗೆ ಅತಿಶಯಗಳಣಿಸದಲೆ ವಸ್ತು ಇದರಲ್ಲಿ ಕೇಳು ವೈರಾಗ್ಯವ | ವಿಸ್ತಾರ ಮಹಿಮ ಶ್ರೀ ಪುರಂದರವಿಟ್ಠಲನ ಸ್ವಸ್ಥಚಿತ್ತದಿ ನೆನೆದು ಮುಕ್ತಿ ಪಡೆ ಮನುಜ ||

Thoughts & Reflections

0

No reflections shared yet. Be the first to share your thoughts!

Share your thought