← Back to home
ಯಾರೆ ರಂಗನ ಯಾರೆ ಕೃಷ್ಣನ ಕರೆಯ ಬಂದವರು
Author: ಪುರಂದರದಾಸCategory: ಶ್ರೀಕೃಷ್ಣRaaga: ಹಿಂದೋಳTaala: ಛಾಪುತಾಳ
ॐ
ಯಾರೆ ರಂಗನ ಯಾರೆ ಕೃಷ್ಣನ ಕರೆಯ ಬಂದವರು ॥
ಗೋಪಾಲಕೃಷ್ಣನ ಪಾಪವಿನಾಶನ
ಈ ಪರಿಯಿಂದಲಿ ಕರೆಯ ಬಂದವರು ॥
ವೇಣುವಿನೋದನ ಪ್ರಾಣಪ್ರಿಯನ
ಜಾಣೆಯರರಸನ ಕರೆಯ ಬಂದವರು ॥
ಕರಿರಾಜವರದನ ಪರಮಪುರುಷನ
ಪುರಂದರವಿಟ್ಠಲನ ಕರೆಯ ಬಂದವರು ॥
Thoughts & Reflections
0No reflections shared yet. Be the first to share your thoughts!