← Back to home
ನೀನೇ ಅನಾಥಬಂಧು ಕಾರುಣ್ಯಸಿಂಧು
Author: ಪುರಂದರದಾಸCategory: ಶ್ರೀಕೃಷ್ಣRaaga: ಬಿಭಾಸTaala: ತ್ರಿತಾಲ
ॐ
ನೀನೇ ಅನಾಥಬಂಧು ಕಾರುಣ್ಯಸಿಂಧು ॥
ಪತಿಗಳೈವರಿದ್ದರೇನು
ಸತಿಯ ಭಂಗ ಬಿಡಿಸಲಿಲ್ಲ
ಗತಿ ನೀನೇ ಮುಕುಂದನೆಂದರೆ
ಅತಿ ವೇಗದಿ ಬಂದೊದಗಿದೆ ಕೃಷ್ಣಾ॥
ಶಿಲೆಯ ಮೆಟ್ಟಿ ಕುಲಕೆ ತಂದೆ
ಬಲಿಯ ಬೇಡಿ ಸತ್ಪದವಿಯನಿತ್ತೆ
ಸುಲಭದಿ ಭಜಿಸುವ ಭಕ್ತರ ಸಲಹುವ ನಮ್ಮ
ಚೆಲುವ ಪುರಂದರ ವಿಠ್ಠಲರಾಯ ॥
Thoughts & Reflections
0No reflections shared yet. Be the first to share your thoughts!