← Back to home
ಎಲೆ ಮನ ಮುರಾರಿಯನೆ ಕೊಂಡಾಡೋ
Author: ವಿಜಯದಾಸCategory: ಶ್ರೀಕೃಷ್ಣRaaga: ಕಾಫಿ ಕಾನಡಾTaala: ಕವಾಲೀ
ॐ
ಎಲೆ ಮನ ಮುರಾರಿಯನೆ ಕೊಂಡಾಡೋ ॥
ಕಾಲನ ದೂತರ ಕಾಲಿಗೆ ಬಿದ್ದರೆ
ನಾಳೆಗೆ ನಿಲುವರೇ ನೋಡೋ ॥
ಮಂದಿಯ ಮಾತಿಗೆ ಎಂದಿಗೂ ಮರುಗದೆ
ಮುಂದಿನ ಗತಿ ನೀ ನೋಡೋ ॥
ರಾಜೀವಾಕ್ಷ ಘನಶ್ಯಾಮ
ವಿಜಯ ವಿಟ್ಠಲನ ಪಾಡೋ ॥
Thoughts & Reflections
0No reflections shared yet. Be the first to share your thoughts!