Bhasaka
← Back to home

ನಿನ್ನ ಭಕುತಿ ಭೀರೋ ದೇವ

Author: ಪುರಂದರದಾಸCategory: ಶ್ರೀಕೃಷ್ಣRaaga: ತಿಲಕ್ ಕಾಮೋದ್Taala: ಕವಾಲೀ
ನಿನ್ನ ಭಕುತಿ ಭೀರೋ ದೇವ ಎನ್ನ ಮನ್ನಿಸಿ ಸಲಹುವರಾರೋ ॥ ಪನ್ನಗಶಯನ ಲಕ್ಷ್ಮೀರಮಣ ವೇದ ಸನ್ನುತ ಪದ ಸರ್ವೇಶಾ ಇನ್ನು ಬಿಡಿಸೋ ಮೋಹಪಾಶ ಆಪದ್ಬಾಂಧವ ಶ್ರೀನಿವಾಸ ॥ ನಾರದ ಗಾನವಿಲೋಲ ಭೂರಿ ಭಕ್ತರ ಪರಿಪಾಲ . ಶ್ರೀರಮಣಾ ಕರುಣಾಕರ ದೇವ ನೀರದಶ್ಶ್ಕಾಮ ಕೌಸ್ತುಭಾಲ ॥ ಕರಿವರವರದ ಅಪ್ರಮೇಯ ಅರಿತು ಪಾಲಿಸೋ ಯೋಗಿಜ್ಞೇಯ ಸುರಮುನಿಹೃದಯಾ ನೀನೇ ಕಾಯೋ ಗುರುಪುರಂದರ ವಿಟ್ಠಲರಾಯ ॥

Thoughts & Reflections

0

No reflections shared yet. Be the first to share your thoughts!

Share your thought