Bhasaka
← Back to home

ಮನವೆನ್ನ ಮಾತು ಕೇಳದು ಮಂದಜ್ಞಾನದಿ

Author: ಪುರಂದರದಾಸCategory: ಶ್ರೀಕೃಷ್ಣRaaga: ಪೂರಿಯಾಧನಾಶ್ರೀTaala: ತ್ರಿತಾಲ
ಮನವೆನ್ನ ಮಾತು ಕೇಳದು ಮಂದಜ್ಞಾನದಿ ತನುವಿನಾಸೆಯು ಬಿಡಲೊಲ್ಲದು ॥ ದೇಹ ಸಂಬಂಧಿಗಳಾದವರೈವರು ಮೋಹಪಾಶದಿ ಕಟ್ಟಿ ಬಿಗಿದಿಹರೈ ದೇಹವನಿತ್ಯವೆಂಬುವ ಗುರುತರಿಯದೆ ಮಾಯಾ ಪ್ರಪಂಚವು ಬದ್ಧವಾಗಿದೆ ॥ ಸಾಧುಸಜ್ಜನರ ಸಂಗವ ಮಾಡಿ ಪರಗತಿಗೆ ಆಧಾರವನು ಮಾಡಲೊಲ್ಲದಯ್ಕಾ ಕ್ರೋಧ ಕುಹಕ ದುಷ್ಪರೊಡನಾಡಿ ಕಾಲನ ಬಾಧೆಗೆ ಗುರಿಯ ಮಾಡುತಲಿದೆ ಹರಿಯೆ ॥ ಮದಗಜ ಮೈಯ ಮರೆತು ಮುಂದುಗಾಣದೆ ಕದುವಿನೊಳಗೆ ಬಿದ್ದಂತಾಯಿತಯ್ಯ್ಕಾ ಹೃದಯ ಕಮಲದಲ್ಲಿ ನಿಂತು ರಕ್ಷಿಸೋ ಎನ್ನ ಪದುಮಾಕ್ಷ ವರದ ಶ್ರೀ ಪುರಂದರವಿಟ್ಕಲ ||

Thoughts & Reflections

0

No reflections shared yet. Be the first to share your thoughts!

Share your thought