Bhasaka
← Back to home

ಮಾನವ ಜನ್ಮ ದೊಡ್ಡದು

Author: ಪುರಂದರದಾಸCategory: ವೈರಾಗ್ಯRaaga: ಪಂತುವರಾಳಿTaala: ಅಟ್ಟ
ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲಿ ಬೇಡಿ ಹುಚ್ಚಪ್ಪಗಳಿರಾ ॥ ಕಣ್ಣು ಕೈ ಕಾಲ್ಕಿವಿ ನಾಲಿಗೆ ಇರಲಿಕ್ಕೆ ಮಣ್ಣು ಮುಕ್ಕಿ ಮರುಳಾಗುವರೆ ಹೆಣ್ಣು ಮಣ್ಣಿಗಾಗಿ ಹರಿನಾಮಾಮೃತ ಉಣ್ಣದೆ ಉಪವಾಸ ಇರುವರೆ ಖೋಡಿ ॥ ಕಾಲನ ದೂತರು ಕಾಲ್ಚಿಡಿದೆಳೆವಾಗ ತಾಳು ತಾಳೆಂದರೆ ತಾಳುವರೆ ಧಾಳಿ ಬಾರದ ಮುನ್ನ ಧರ್ಮವ ಗಳಿಸಿರೋ ಸುಳ್ಳಿನ ಸಂಸಾರ ಸುಳಿಗೆ ಸಿಕ್ಕಲು ಬೇಡಿ ॥ ಏನು ಕಾರಣ ಯದುಪತಿಯನು ಮರೆತಿರಿ ಧನ ಧಾನ್ಯ ಪುತ್ರರು ಕಾಯುವರೆ ಇನ್ನಾದರೂ ಏಕಭಾವದಿ ಭಜಿಸಿರೋ ಚನ್ನ ಶ್ರೀ ಪುರಂದರ ವಿಟ್ಟಲರಾಯನ ॥

Thoughts & Reflections

0

No reflections shared yet. Be the first to share your thoughts!

Share your thought