Bhasaka
← Back to home

ಮನಸು ಕರಗದೇ ಸ್ವಾಮಿ

Author: ಲಿಂಗಸೂರು ಯೋಗೀಂದ್ರಪ್ಪCategory: ಶ್ರೀಕೃಷ್ಣRaaga: ಕಾನಡಾTaala: ರೂಪಕತಾಳ
ಮನಸು ಕರಗದೇ ಸ್ವಾಮಿ॥ ದೀನನಾಗಿ ನಿನ್ನ ಪಾದವನ್ನು ನಂಬಿದೆನೋ ಸ್ವಾಮಿ ॥ ಒಡಲಿಗೋಸುಗವಾಗಿ ಪರರ ಅಡಿಗಳಿಗೆ ನಮಿಸಿ ಅವರ ಬಿರುನುಡಿಗಳ ಕೇಳಲಾರೆ ಬೇಡಲಾರೆ ಮುರಾರೇ ॥ ಜನನಿ ಜನಕ ನೀನೇ ಎಂದು ನಿನ್ನ ನಂಬಿದೆನೋ ಬಂಧು ಎನ್ನ ಪಾಲಿಸೋ ಬೇಗ ಬಂದು ಮನ್ನಿಸಯ್ಯ ಕೃಪಾಸಿಂಧು ॥ ದಿನವು ಕಳೆದು ಹೋಯಿತಲ್ಲಾ ಪ್ರಾಣೇಶ ವಿಟ್ಠಲಾ ಮನ್ನಿಸುವರು ಒಬ್ಬರಿಲ್ಲ ಕಾಯೋ ಬಾಲಗೋಪಾಲ ॥

Thoughts & Reflections

0

No reflections shared yet. Be the first to share your thoughts!

Share your thought