Bhasaka
← Back to home

ಶ್ರೀಹರಿ ಕಾಯೋ ಕರುಣಾನಿಧೇ

Author: ಮಹೀಪತಿದಾಸCategory: ಶ್ರೀಕೃಷ್ಣRaaga: ಹಮೀರ್ - ಕೇದಾರ್Taala: ತ್ರಿತಾಲ
ಶ್ರೀಹರಿ ಕಾಯೋ ಕರುಣಾನಿಧೇ || ಖಗವರಗಮನ ಕರುಣಾನಿಧೇ || ಜ್ಞಾನ ಧ್ಯಾನದ ನಿಜ ಸಾಧನವರಿಯೆ | ನೀನೆ ಗತಿಯೆನುತ ಮಾಡುವೆ ನಮನ || ಘೋರ ಸಂಸಾರದಿ ತಾಪದಿ ನೊಂದೆ | ವಾರಿಭವಭಯಹರ ಅಘಕುಲಶಮನ || ಗುರು ಮಹೀಪತಿ ಪ್ರಭು ಅನಾಥಬಂಧು | ಚರಣಕಮಲಗಳಲಿರಿಸೆನ್ನ ಮನವ ||

Thoughts & Reflections

0

No reflections shared yet. Be the first to share your thoughts!

Share your thought