Bhasaka
← Back to home

ಸಂಸಾರವೆಂಬಂಥ ಸೌಭಾಗ್ಯವಿರಲಿ

Author: ಪುರಂದರದಾಸCategory: ಶ್ರೀಕೃಷ್ಣRaaga: ಕಾಂಬೋಧಿTaala: ಆಟತಾಳ
ಸಂಸಾರವೆಂಬಂಥ ಸೌಭಾಗ್ಯವಿರಲಿ ಕಂಸಾರಿ ನೆನೆವೆಂಬ ಸೌಭಾಗ್ಯವಿರಲಿ ॥| ತಂದೆ ನೀನೇ ಕೃಷ್ಣ ತಾಯಿ ಇಂದಿರೆ ದೇವಿ ಪೊಂದಿದ ಅಣ್ಣನು ವನಜ ಸಂಭವನು ಇಂದುಮುಖಿ ಸರಸ್ವತಿ ದೇವಿಯೆ ಅತ್ತಿಗೆಯು ಎಂದೆಂದಿಗೂ ವಾಯುದೇವರೆ ಗುರುವು ॥ ಭಾರತೀದೇವಿಯೆ ಗುರುಪತ್ನಿ ಎನಗೆ ಗರುಡ ಶೇಷಾದಿಗಳೆ ಗುರುಪುತ್ರರು ಹರಿದಾಸರೆಂಬುವರು ಇಷ್ಟಬಾಂಧವರೆನಗೆ ಹರಿಭಜನೆ ನಡೆಯುತಿಹ ಸ್ಥಳವೆ ಮಂದಿರವು ॥ ಸರ್ವಾಭಿಮಾನವನು ತ್ಯಜಿಸುವುದೇ ಸುಜ್ಞಾನ ಹರಿಯ ನಾಮವೇ ಇನ್ನೂ ಅಮೃತಪಾನ ವರಪುರಂದರ ವಿಟ್ಠಲ ನಿನ್ನ ಪಾದಧ್ಕಾನ ಕರುಣಿಸಿ ಅನವರತ ಕರಪಿಡಿದು ಕಾಯೋ ॥

Thoughts & Reflections

0

No reflections shared yet. Be the first to share your thoughts!

Share your thought