Bhasaka
← Back to home

ಸಕಲಕೆಲ್ಲಕೆ ನೀನೇ

Author: ಮುಪ್ಪಿನ ಷಡಕ್ಷರಿCategory: ಶ್ರೀಶಿವRaaga: ಕೇದಾರಾTaala: ಝಪತಾಲ
ಸಕಲಕೆಲ್ಲಕೆ ನೀನೇ ಅಕಲಂಕ ಗುರುವೆಂದು ನಿಖಿಲ ಶಾಸ್ತ್ರವು ಪೇಳುತಿರಲರಿದೆನು || ಅವರವರ ದರುಶನಕೆ ಅವರವರ ದೇಶದಲಿ ಅವರವರಿಗೆಲ್ಲ ಗುರು ನೀನೊಬ್ಬನೇ | ಅವರವರ ಭಾವಕ್ಕೆ ಅವರವರ ಅರ್ಚನೆಗೆ ಅವರವರಿಗೆ ದೇವ ನೀನೊಬ್ಬನೇ || ಹೋರಾಟವಿಕ್ಕಿಸಲು ಬೇರಾದೆಯಲ್ಲದೆ ಬೇರುಂಟೆ ಜಗದೊಳಗೆ ಎಲ್ಲ ದೇವನೇ | ಆರೂ ಅರಿಯರು ನೀನು ಬೇರಾದ ಪರಿಗಳನು ಮಾರಾರಿ ಶಿವ ಷಡಕ್ಷರಿಲಿಂಗವೆ ||

Thoughts & Reflections

0

No reflections shared yet. Be the first to share your thoughts!

Share your thought