Bhasaka
← Back to home

ಸಕಲಭಯ ತಲ್ಲಣವ

Author: ವಚನವೇದCategory: ಶ್ರೀಕೃಷ್ಣRaaga: ಸಾಹಾನಾTaala: ಝಪತಾಲ
ಸಕಲಭಯ ತಲ್ಲಣವ ಪರಿಹರಿಪ ಮಹಿಮನನು ಒಮ್ಮೆಯಾದರು ಏಕೆ ಕರೆಯದಿರುವೆ | ಭವಘೋರಭ್ರಮೆಯಲ್ಲಿ ನಿನ್ನ ನೀನೇ ಮರೆತೆ ಏನೀ ವಿಡಂಬನೆಯು ನಿನಗೆ ತರವೇ || ಜನಧನದ ಸಂಗದಲಿ ಅವನ ಮರೆಯದ ತೆರದಿ ಎಚ್ಚರಿರು ಭ್ರಮೆಯನ್ನು ಅತ್ತ ದೂಡು | ನಿಜವನಾರಾಧಿಸಲು ಸರ್ವಪಾಪವಿಮುಕ್ತ ನನ್ನ ಮಾತಿನ ನಿಜವನಳೆದು ನೋಡು || ಭವಜಲಧಿಯನು ದಾಟಿ ನಡೆವ ಮನವಿರೆ ನಿನಗೆ ಅಳಿಯಾಸೆಗಳ ತೊರೆದು ಹರಿಯ ನುತಿಸು | ದೇಹಮನಪ್ರಾಣಗಳ ಅವನಿಗರ್ಪಿತ ಮಾಡಿ ಪ್ರೇಮದಾರಾಧನೆಗೆ ಮನವ ಸಲಿಸು ||

Thoughts & Reflections

0

No reflections shared yet. Be the first to share your thoughts!

Share your thought