← Back to home
ಎಷ್ಟು ದಿನ ಕಾದಿರಲಿ ನಿನ್ನ ಬಾಗಿಲಲಿ
Author: ಸ್ವಾಮಿ ಹರ್ಷಾನಂದCategory: ಶ್ರೀರಾಮಕೃಷ್ಣRaaga: ಕಾನಡಾTaala: ಝಂಪೆತಾಳ
ॐ
ಎಷ್ಟು ದಿನ ಕಾದಿರಲಿ ನಿನ್ನ ಬಾಗಿಲಲಿ
ಹೇ ರಾಮಕೃಷ್ಣ ಕೃಪೆ ತೋರು ಒಮ್ಮೆ ॥
ನೀ ರಾಮನಂತೆ ನೀ ಕೃಷ್ಣನಂತೆ
ನೀ ರುದ್ರ ನೀ ಬ್ರಹ್ಮ ಎನುತಿಹರು ಭಕುತರು॥
ಪತಿತಪಾವನನಂತೆ ಭಕ್ತವತ್ಸಲನಂತೆ
ಯೋಗಿಗಳ ಜ್ಞಾನಿಗಳ ಪರಮಗುರಿ ನೀನಂತೆ ॥
ಅಂಥವರು ಇಂಥವರು ರಾಮಕೃಷ್ಣರು ಎಂದು
ಮನವು ಬಂದಂತೆಲ್ಲಾ ಹೊಗಳುತಿದೆ ಜನವೃಂದ ॥
ಎನಗಿತ್ತ ದರುಶನವೆ ಉಳಿಸಬಲ್ಲದು ನಿನ್ನ '
ಮಾನವನು ಕೀರ್ತಿಯನು ಉಳಿದೆಲ್ಲ ಬಿರುದುಗಳನು ॥
ದಯತೋರಿ ಬಂದೊಮ್ಮೆ ನಲಿದಾಡಿ ಕಣ್ಮುಂದೆ
ನೀ ಎನ್ನ ಜೀವನವ ಪೂರ್ಣವಾಗಿಸು ತಂದೆ! ॥
Thoughts & Reflections
0No reflections shared yet. Be the first to share your thoughts!