Bhasaka
← Back to home

ತಾಯಿ ಶಾರದೆ ನಾವು ನಿನ್ನಯ

Author: ಸ್ವಾಮಿ ಹರ್ಷಾನಂದCategory: ಶ್ರೀಶಾರದಾದೇವಿRaaga: ಕಾಂಭೋಜಿTaala: ಮಿಶ್ರಛಾಪುತಾಳ
ತಾಯಿ ಶಾರದೆ ನಾವು ನಿನ್ನಯ ಚರಣಕಮಲಕೆ ನಮಿಪೆವು | ಪರಮಪಾವನೆ ನಿನ್ನ ಪುತ್ರರ ಪ್ರೇಮದಿಂದಲಿ ಪಾಲಿಸು ॥ ದೇವದೇವನ ಹೃದಯದಲ್ಲಿನ ಕರುಣೆಯೆಂಬುವ ಗಂಗೆ ನೀ। ಆರ್ತಜೀವರ ಶಾಂತಗೊಳಿಸಲು ಹರಿದು ಬಂದಿಹೆ ಶೀಘ್ರದಿ॥ ನಿನ್ನ ನಾಮದ ವಾರಿಯಲಿ ನಾ- ವೆಲ್ಲ ಮೀಯುತ ಹರ್ಷದಿಂ! ಶುದ್ಧರಾಗಲು ಮುಕ್ತರಾಗಲು ಯತ್ನ ನಡೆಸುತಲಿರ್ಪೆವು ॥ ಸಾಧುಸಜ್ಜನ ದುಷ್ಪದುರ್ಜನ- ರೆಲ್ಲ ನಿನ್ನಯ ಮಕ್ಕಳೇ। ನಮ್ಮನೆಲ್ಲನು ಕೃಪೆಯ ತೋರುತ ರಕ್ಷಿಸೀಗಲೆ ಮಾತೆಯೆ ॥

Thoughts & Reflections

0

No reflections shared yet. Be the first to share your thoughts!

Share your thought