Bhasaka
← Back to home

ಸತ್ಯ ಜ್ಞಾನ ತಪೋನಿಧಿಯೇ

Author: ಸ್ವಾಮಿ ತದ್ರೂಪಾನಂದCategory: ಶ್ರೀಸ್ವಾಮಿ ವಿವೇಕಾನಂದRaaga: ಹಂಸಾನಂದೀTaala: ಏಕತಾಲ
ಸತ್ಯ ಜ್ಞಾನ ತಪೋನಿಧಿಯೇ ವೀರ್ಯ ಧೈರ್ಯ ತ್ಯಾಗಗಣಿಯೇ | ಭೃತ್ಯ ಜನರ ನಮನವಿದನು ಸ್ವೀಕರಿಸು ನರೇಂದ್ರಮುನಿಯೇ || ಭವದ ಭ್ರಾಂತಿ ಬವಣೆ ನೀಗೆ ಹರನೆ ನರನ ವೇಷ ತಾಳ್ದೆ ಕವಿದ ಭ್ರಮೆಯ ಕತ್ತಲಳಿಸಿ ದಿವ್ಯ ಜ್ಞಾನ ಪ್ರಭೆಯ ತೋರ್ದೆ ಶಾಂತಿ ಕಾಂತಿ ನೀಡಿದೆ || ಹೇಡಿ ಜನರ ಹೃದಯದಲ್ಲಿ ಆತಶ್ರದ್ದೆಶೂನ್ಯರಲ್ಲಿ ಸಿಡಿಲ ಸ್ನಿಗ್ಧ ಮೊಳಗಿನಿಂದ ಶಕ್ತಿ ಶ್ರದ್ದೆ ಹೊಳೆ ಹರಿಸಿದೆ ಧೈರ್ಯ ಸ್ಥೈರ್ಯ ಬಿತ್ತಿದೆ || ಕ್ಲೇಶ ಕಷ್ಟಗ್ರಸ್ತ ಜನಕೆ ಅಮೃತಸುಖದ ಧಾಮವಾದೆ ಈಶರೂಪಿ ರಾಮಕೃಷ್ಣ ಶಿಷ್ಯರತ್ನ ಶಿಖಾಮಣಿಯೇ ಜ್ಞಾನ ಸೌಖ್ಯದಾತನೆ ||

Thoughts & Reflections

0

No reflections shared yet. Be the first to share your thoughts!

Share your thought