Bhasaka
← Back to home

ನಿನ್ನ ಅನುಪಮ ಪ್ರೇಮಕಾಂತಿಯ

Author: ವಚನವೇದCategory: ಇತರೆRaaga: ಭೂಪಾಲೀTaala: ತೇವರಾ
ನಿನ್ನ ಅನುಪಮ ಪ್ರೇಮಕಾಂತಿಯ ವದನ ದರುಶನವಾಗಲು ಜಗದ ಜಂಜಡ ದುಗುಡುಗಳ ಭಯ ನನ್ನ ಬಳಿಗೇ ಬಾರದು ॥ ಉದಯ ಸೂರ್ಯನ ಮೊದಲ ಕಿರಣವು ಕತ್ತಲೆಯ ಕಳೆವಂದದಿ ನಮ್ಮ ಎದೆಯೊಳು ನಿನ್ನ ಬೆಳಕೇ ಮೂಡಿ ನೋವನು ನೀಗಿ ಮನದೊಳು ನಿನ್ನ ಪ್ರೇಮವನೆರೆವುದು ॥ ನಿನ್ನ ಕರುಣಾ ಪ್ರೇಮಗಳ ನಾ ನನ್ನ ಮನದಲಿ ನೆನೆದರೆ ಹರ್ಷ ಬಾಷ್ಪದ ಹೊನಲು ಹರಿವುದು ಯಾವ ತಡೆಯೂ ಇಲ್ಲದೆ ॥ ಜಯವು ಕರುಣಾಮಯನೆ ನಿರುತವು ನಿನ್ನ ಒಲವನೆ ಸಾರುವೆ ನಿನ್ನ ಕರ್ಮದಿ ನನ್ನ ಪ್ರಾಣವು ಸಮೆಯಲೆನ್ನುತ ಬೇಡುವೆ ॥

Thoughts & Reflections

0

No reflections shared yet. Be the first to share your thoughts!

Share your thought