Bhasaka
← Back to home

ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ

Author: ಪುರಂದರದಾಸCategory: ವೈರಾಗ್ಯRaaga: ಬಾಗೇಶ್ರೀTaala: ಸುರಫಾಕ್ತಾ
ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ ಚಿಂತೆಯನು ಬಿಟ್ಟು ಶ್ರೀ ಹರಿಯ ನೆನೆ ಮನವೆ ॥ ದಿವರಾತ್ರಿಯೆನ್ನದೆ ವಿಷಯ ಲಂಪಟನಾಗಿ ಸವಿಯೂಟಗಳನುಂಡು ಭ್ರಮಿಸಬೇಡ ` ಅವನ ಕೊಂದಿವನ ಕೊಂದು ಅರ್ಥವನು ಗಳಿಸುವರೆ ಜವನ ದೂತರು ಬರುವ ಹೊತ್ತ ನೀನರಿಯೆ ॥ ಅಟ್ಟಡಿಗೆಯುಣಲಿಲ್ಲ ಇಷ್ಟದರುಶನವಿಲ್ಲ ಕೊಟ್ಟ ಸಾಲವ ಕೇಳ್ವ ಹೊತ್ತನರಿಯೆ ಕಟ್ಲೆ ತುಂಬಿದ ಮೇಲೆ ಕ್ಷಣ ಮಾತ್ರ ಇರಲಿಲ್ಲ ಅಷ್ಟರೊಳು ಪುರಂದರ ವಿಟ್ಫಲನ ನೆನೆ ಮನವೆ ॥

Thoughts & Reflections

0

No reflections shared yet. Be the first to share your thoughts!

Share your thought