Bhasaka
← Back to home

ಸದಾ ಎನ್ನ ಹೃದಯದಲ್ಲಿ

Author: ವಿಜಯದಾಸCategory: ಶ್ರೀಕೃಷ್ಣRaaga: ಪಂತುವರಾಳಿTaala: ಆದಿತಾಲ
ಸದಾ ಎನ್ನ ಹೃದಯದಲ್ಲಿ ವಾಸಮಾಡೋ ಶ್ರೀಹರಿ | ನಾದಮೂರ್ತಿ ನಿನ್ನ ಚರಣ ಮೋದದಿಂದ ಭಜಿಸುವೆನೋ || ಧ್ಯಾನವೆಂಬ ನವರತ್ನದ ಮಂಟಪದ ಮಧ್ಯದಲ್ಲಿ | ಗಾನಲೋಲನ ಕುಳ್ಳಿರಿಸಿ ಜ್ಞಾನದಿಂದ ಭಜಿಸುವೆನೋ || ಭಕ್ತಿರಸವೆಂಬ ಮುತ್ತು ಮಾಣಿಕ್ಯದ ಹರಿವಾಣದಿ | ಮುಕ್ತನಾಗಬೇಕು ಎಂದು ಮುತ್ತಿನ ಆರತಿಯೆತ್ತುವೆನೋ || ನಿನ್ನ ನಾನು ಬಿಡುವನಲ್ಲ ಎನ್ನ ನೀನು ಬಿಡಲು ಸಲ್ಲ| ಘನ್ನಮಹಿಮ ವಿಜಯವಿಟ್ಠಲ ನಿನ್ನ ಭಕ್ತನ ಕೇಳೋ ಸೊಲ್ಲ||

Thoughts & Reflections

0

No reflections shared yet. Be the first to share your thoughts!

Share your thought