Bhasaka
← Back to home

ಯಾರಿದ್ದರೇನಯ್ಯ ನೀನಲ್ಲದೆನಗಿಲ್ಲ

Author: ಪುರಂದರದಾಸCategory: ಶ್ರೀಕೃಷ್ಣRaaga: ಕಲ್ಯಾಣೀTaala: ಝಂಪೆತಾಳ
ಯಾರಿದ್ದರೇನಯ್ಯ ನೀನಲ್ಲದೆನಗಿಲ್ಲ ' ಕಾರುಣ್ಯನಿಧಿ ಹರಿಯೇ ಕೈಯ ಬಿಡಬೇಡ ॥ ದುರುಳಕೌರವನಂದು ದ್ರುಪದಜೆಯ ಸೀರೆಯನು ಕರದಿಂದ ಸೆಳೆಯುತಿರೆ ಪತಿಗಳೆಲ್ಲ ಗರಹೊಯ್ದಂತಿರ್ದರಲ್ಲದೆ ನರಹರಿಯೆ ಕರುಣದಿಂ ನೀನಲ್ಲದಿನ್ಕಾರು ಕಾಯ್ದವರು ॥ ಅಂದು ನೆಗಳಿನ ಬಾಧೆಯಿಂದ ಗಜರಾಜನನು ತಂದೆ ನೀ ವೈಕುಂಠದಿಂದ ಬಂದು ಇಂದಿರೀಶನೆ ಚಕ್ರದಿಂದ ನೆಗಳಿನ ಬಾಯ ಸಂದಿಯನು ಸೀಳಿ ಪೊರೆದೆಯಲ್ಲೋ ಹರಿಯೆ ॥ ಅಜಮಿಳನು ಕುಲಗೆಟ್ಟು ಕಾಲದೂತರು ಬರಲು ನಿಜಸುತನ ಕರೆಯೆ ನೀನತಿವೇಗದಿ ತ್ರಿಜಗದೊಡೆಯನೆ ಪುರಂದರವಿಟ್ಠಲ ಕರುಣದಲಿ ನಿಜದೂತರ ಕಳುಹಿ ಕಾಯ್ದೆ ಗಡ ಹರಿಯೆ ॥

Thoughts & Reflections

0

No reflections shared yet. Be the first to share your thoughts!

Share your thought