Bhasaka
← Back to home

ಸಪ್ತಋಷಿ ಭುವನದಿಂದ

Author: ಸ್ವಾಮಿ ತದ್ರೂಪಾನಂದCategory: ಶ್ರೀಸ್ವಾಮಿ ವಿವೇಕಾನಂದRaaga: ಸಿಂಧುಭೈರವೀTaala: ಕವಾಲೀ
ಸಪ್ತಋಷಿ ಭುವನದಿಂದ ಇಳೆಗಿಳಿದು ಬಂದ | ಶ್ರೀಗುರುದೇವನ ಕಂದ ವಿವೇಕಾನಂದ || ತ್ಯಾಗವಿರಾಗದ ಕಡಲು ಭೋಗಗಳ ಸಿಡಿಲು | ಜಗಜನರಿಗೆ ತಾಯ್ಮಡಿಲು ಹರನ ನರನೊಡಲು || ಆತ್ಮಜ್ಞಾನದ ಕಾಂತಿ ಮೋಹದುಪಶಾಂತಿ | ಬಳಲಿದರಿಗೆ ವಿಶ್ರಾಂತಿ ನೀಗಿರುವೆ ಭ್ರಾಂತಿ || ಮಿರುಗುವ ವಿದ್ಯಾಸೂರ್ಯ ನಿಸ್ಸಿಮವೀರ್ಯ | ಮೇರೆಯ ಅರಿಯದ ಧೈರ್ಯ ಎಸಗೆ ಗುರುಕಾರ್ಯ ||

Thoughts & Reflections

0

No reflections shared yet. Be the first to share your thoughts!

Share your thought