Bhasaka
← Back to home

ಎಲ್ಲಿರುವೆ ತಂದೆ ಬಾರೋ ಮಾರುತಿ

Author: ಶೇಷಗಿರಿದಾಸCategory: ಶ್ರೀಹನುಮಂತRaaga: ಬೇಹಾಗ್Taala: ತ್ರಿತಾಲ
ಎಲ್ಲಿರುವೆ ತಂದೆ ಬಾರೋ ಮಾರುತಿ ॥ ಎಲ್ಲೆಲ್ಲಿ ನೋಡಿದರೆ ಅಲ್ಲಿ ನಿನ್ನ ಕೀರುತಿ ಎಲ್ಲಿ ನೋಡಲು ನಿನ್ನ ಕೂಡಿರುವ ಶ್ರೀಪತಿ ॥ ಅಂದು ರಘುನಂದನನ ವಂದಿಸುತ ಇಂದಿರೆಯ ಕಂಡು ಕೊಂಡಾಡಿದ್ಯಲ್ಲೋ॥ ರಂಗನರ್ಧಾಂಗಿಗೆ ಉಂಗುರವಿತ್ತು ವನ ಭಂಗವ ಮಾಡಿದ್ಯಲ್ಲೋ॥ ರಕ್ಕಸರ ಸೊಕ್ಕು ಮುರಿದು ಲಂಕೆಗೆ ಉರಿ ಇಕ್ಕಿ ಓಡಾಡಿದ್ಯಲ್ಲೋ ॥ ಮಂದಮತಿ ಇಂದ್ರಜಿತು ನಿಂದಿಸಲು ನೀ ದಶ ಕಂಧರನ ಗುದ್ದಿದ್ಯಲ್ಲೋ॥ ಶೇಷಗಿರಿವಾಸನ ದಾಸನೇ ನಿನ್ನ ದಾಸನಲಿ ದಯಮಾಡೋ ಮಾರುತಿ ॥

Thoughts & Reflections

0

No reflections shared yet. Be the first to share your thoughts!

Share your thought