Bhasaka
← Back to home

ಸಾಗುತಿಹುದು ಚಿತ್ತಭೃಂಗ

Author: ವಚನವೇದCategory: ಶ್ರೀಮಹಾಕಾಳಿRaaga: ಭೂಪಾಲೀTaala: ದಾದರಾ
ಸಾಗುತಿಹುದು ಚಿತ್ತಭೃಂಗ ಕಾಳೀಪದ ನೀಲಕಮಲ ಮಧುಪಾನದ ಆಸೆಗೆ | ಸಕಲ ವಿಷಯ-ಕುಸುಮರಸವು ಎಷ್ಟಾದರು ತುಚ್ಛವೆಂದು ತಿಳಿಯಿತಿಂದು ಮನಸಿಗೆ || ತಾಯ ಪಾದಕಮಲ ನೀಲ ಮಧು ಕುಡಿಯುವ ಭೃಂಗ ನೀಲ ನೀಲದಲ್ಲಿ ನೀಲ ಸೇರಿ ನೀಲವಾದ ಪರಿಯನು ಕಂಡು ಬೆರಗುವಡುವನು || ಸುಖ ಬಂದರೆ ಹಿಗ್ಗದೆ ನೋವಿನಲ್ಲಿ ಕುಗ್ಗದೆ ಆನಂದಸಿಂಧುವಿನಲಿ ನಿರುತ ತೇಲುತಿರುವನು ಭಕ್ತ ಕಮಲಾಕಾಂತನು ||

Thoughts & Reflections

0

No reflections shared yet. Be the first to share your thoughts!

Share your thought