Bhasaka
← Back to home

ನಮ್ಮಮ್ಮ ಶಾರದೆ ಉಮಾಮಹೇಶ್ವರಿ

Author: ಕನಕದಾಸCategory: ಶ್ರೀಗಣೇಶRaaga: ಹಂಸಧ್ವನಿTaala: ಆದಿತಾಳ
ನಮ್ಮಮ್ಮ ಶಾರದೆ ಉಮಾಮಹೇಶ್ವರಿ ನಿಮ್ಮೊಳಗಿಹನ್ಯಾರಮ್ಮಾ || ಕಮ್ಮ ಗೋಲನ ವೈರಿ ಸುತನಾದ ಸೊಂಡಿಲ ಹೆಮ್ಮೆಯ ಗಣನಾಥನೇ ॥ ಮೋರೆ ಕಪ್ಪಿನ ಭಾವ ಮೊರದಗಲ ಕಿವಿ ಕೋರೆದಾಡೆಯನ್ಯಾರಮ್ಮ ಮೂರು ಕಣ್ಣನ ಸುತ ಮುಂದಿಟ್ಟ ಚಂದ್ರನ ಧೀರತಾ ಗಣನಾಥನೇ ಅಮ್ಮಯ್ಕಾ ॥ ಉಟ್ಟದಟ್ಟಿಯು ಬಿಗಿದುಟ್ಟ ಚಲ್ಲಣದ ಧಿಟ್ಟ ತಾನಿವನ್ಯಾರಮ್ಮ ಪಟ್ಟದರಾಣಿ ಪಾರ್ವತಿಯ ಕುಮಾರ ಹೊಟ್ಟೆಯ ಗಣನಾಥನೇ ಅಮ್ಮಯ್ಯ ॥ ರಾಸಿ ವಿದ್ಯೆಯ ಬಲ್ಲ ರಮಣಿಹಂಬುನೆಲ್ಲ ಭಾಷಿಗನಿವನ್ಯಾರಮ್ಮ ಲೇಸಾಗಿ ಸುಜನರ ಸಲಹುವ ನೆಲೆಯಾದಿ ಕೇಶವನ ದಾಸಕಾಣೇ ಅಮ್ಮಯ್ಯ ||

Thoughts & Reflections

0

No reflections shared yet. Be the first to share your thoughts!

Share your thought