Bhasaka
← Back to home

ಮಾತೃಹೃದಯದೆನ್ನ ಪೊರೆದೆ

Category: ಶ್ರೀದೇವಿRaaga: ಜೋಗ್‌Taala: ದಾದರಾ
ಮಾತೃಹೃದಯದೆನ್ನ ಪೊರೆದೆ ಸತ್ಯಚಿದಾನಂದ ವರದೆ ಕರ್ತೃ ಕರ್ಮ ಕ್ರಿಯೆ ನೀನೆ ನಿಮಿತ್ತ ಮಾತ್ರ ಇರುವೆ ನಾನೆ ॥ ಘನವಿಘೋರ ದುರಿತನೆಲ್ಲ ಕ್ಷಣದಿ ಕರಗಿಸಿದೆ ಎಲ್ಲ ನನಸಗೈೆದೆ ಕನಸನೆಲ್ಲ ಜನನಿ ನೀನೆ ಭುವನಕೆಲ್ಲ॥ ಸಿರಿ ಶಾರದೆ ಗೌರಿ ನೀನೆ ಹರಿ ಅಜ ಶಿವ ಶಕ್ತಿ ನೀನೆ ಗಿರಿಜೆ ಅನ್ನಪೂರ್ಣೆ ನೀನೆ ತರಿದೆದುರುಳರೆಲ್ಲ ನೀನೆ ॥ ಶರಣು ತಾಯೆ ಗಾಯತ್ರೀ ಸ್ಥಿರದಿ ನೀಡೆಮಗೆ ಸನ್ಮತಿ ಸುರನರಮುರಿ ವಿನುತೆ ಲಲಿತೆ ಉರಗಾಚಲಸ್ಥಿತೆ ವಿಧಾತೆ ॥

Thoughts & Reflections

0

No reflections shared yet. Be the first to share your thoughts!

Share your thought