Bhasaka
← Back to home

ಶಿವನು ತಬ್ಬಲಿ ಪರದೇಸಿಯಂತೆ ತಂಗಿ

Author: ಚಿ. ಸದಾಶಿವಯ್ಯCategory: ಶ್ರೀಶಿವRaaga: ರಾಗಮಾಲಿಕೆTaala: ತೇವರಾ
ಮೇಘ ಶಿವನು ತಬ್ಬಲಿ ಪರದೇಸಿಯಂತೆ ತಂಗಿ ಅವಗೆ ಮನೆ ಮಠ ಇಲ್ಲವಂತೆ ತಂಗಿ ॥ ತಂದೆ ತಾಯಿಗಳಿಲ್ಲ ಬಂಧು ಬಳಗ ಇಲ್ಲ ಕಂದ ನೀನೆಲ್ಲೆಂದು ಕೇಳ್ವರಿಲ್ಲ ತಂಗಿ ॥ ಜೋಗಿಯಾ ಹರಕು ಚಿಂದಿಯ ಬಟ್ಟೆ ಮುರುಕು ಮಣ್ಣಿನ ತಟ್ಟೆ ತಿರಿದು ತಿನ್ನುವ ತಾ ಹಸಿದ ಹೊಟ್ಟೆ ಮಳೆ ಗಾಳಿ ಧಗೆ ಬೆಂಕಿ ಛಳಿ ಮಂಜು ಕೊರೆತದಿ ಬಳಲುವ ಕಂದನ ಕರೆವರಿಲ್ಲ ತಂಗಿ ॥ ಶಿವರಂಜಿನೀ ಬೂದಿ ಹಾಸಿಗೆಯಾಯ್ತು ಹಾದಿ ಮಸಣವಾಯ್ತು ಬೀದಿ ಭಿಕಾರಿಯಂತಲೆದಾಯ್ತು ಸುತ್ತ ಸಾನದಿ ಹತ್ತಿದ ಚಿತೆ ಉರಿ ಅತ್ತ ಕಂದನ ಎತ್ತಿಕೊಂಬರಿಲ್ಲ ತಂಗಿ ॥ ಮೇಘ ಶಿವನು ತಬ್ಬಲಿ ಪರದೇಸಿಯಂತೆ ತಂಗಿ ಅವಗೆ ಮನೆ ಮಠ ಇಲ್ಲವಂತೆ ತಂಗಿ ; ಭೂತ ಬಳಗಗಳು ಪ್ರೇತ ಮರುಳುಗಳು ಭೀತಿ ಪಡಿಸಿ ಸುತ್ತ ಕುಣಿವವಲ್ಲೆ ತಂಗಿ ॥

Thoughts & Reflections

0

No reflections shared yet. Be the first to share your thoughts!

Share your thought