Bhasaka
← Back to home

ಕೃಷ್ಣ ನೀ ಬೇಗನೆ ಬಾರೊ

Category: ಶ್ರೀಕೃಷ್ಣRaaga: ಯಮುನಾಕಲ್ಯಾಣೀTaala: ಮಿಶ್ರಛಾಪುತಾಳ
ಕೃಷ್ಣ ನೀ ಬೇಗನೆ ಬಾರೊ ॥ಪ॥ ಬೇಗನೆ ಬಾರೊ ಮುಖವನ್ನೆ ತೋರೊ ॥ ಅ. ಪ.॥ ಹುಟ್ಟಿದ್ದು ಮಧುರೆ ಬೆಳದಿದ್ದು ಗೋಕುಲ ಜಲಕ್ರೀಡೆಯಾಡಿದ್ದು ಯಮುನಾತೀರ ॥೧॥ ಕಾಲಲಂದುಗೆ ಗೆಜ್ಜೆ ದೀಲದ ಬಾವುಲಿ ನೀಲವರ್ಣನೆ ನಾಟ್ಯವಾಡುತ ಬಾರೊ ॥ ೨॥ ಉಡಿಯಲ್ಲಿ ಉಡುಗೆಜ್ಜೆ ಬೆರಳಲ್ಲಿ ಉಂಗುರ ಕೊರಳೊಳು ಹಾಕಿದ ವೈಜಯಂತಿ ಮಾಲೆ ॥೩॥ ಕಾಶಿ ಪೀತಾಂಬರ ಕೈಯಲ್ಲಿ ಕೊಳಲು ಪೂಸಿದ ಶ್ರೀಗಂಧ ಮೆಯ್ಯುಳು ಗಮ್ಮ ॥ ೪॥ ತಾಯಿಗೆ ಬಾಯಲ್ಲಿ ಜಗವನ್ನು ತೋರಿದ ಜಗದುದ್ಧಾರಕ ನಮ್ಮ ಉಡುಪಿ ಶ್ರೀಕೃಷ್ಣ ॥೫॥

Thoughts & Reflections

0

No reflections shared yet. Be the first to share your thoughts!

Share your thought