Bhasaka
← Back to home

ಎಲ್ಲಾ ರೂಪವು ತಾನಂತೆ ಶಿವ

Author: ಶಿವರಾಮಶಾಸ್ತ್ರೀCategory: ಶ್ರೀಶಿವRaaga: ಧನ್ಯಾಸಿTaala: ಆದಿತಾಳ
ಎಲ್ಲಾ ರೂಪವು ತಾನಂತೆ ಶಿವ- ನೆಲ್ಲೆಲ್ಲಿಯು ತಾನಿಹನಂತೆ ಅಲ್ಲಲ್ಲರಸುತ ಗುಡಿಗಳ ತಿರುಗುವ ಕಳ್ಳರ ಕಣ್ಣಿಗೆ ಮಣ್ಣಂತೆ ॥ ಕಣ್ಣೆಂಬುದು ತನಗಿಲ್ಲಂತೆ ಕಣ್ಣಿಗೆ ಕಣ್ಣಾಗಿಹನಂತೆ ಕಣ್ಣು ಬಿಟ್ಟು ತನ್ನರಸುವ ಜನರಿಗೆ ಬಣ್ಣ-ಬಣ್ಣವಾಗಿಹನಂತೆ || ದೃಶ್ಯವಿದಾದವ ತಾನಂತೆ ದೃಶ್ಯವನರಿವನು ತಾನಂತೆ ದೃಶ್ಯಾದೃಕ್ಕಿನೊಳೆರಡರ ನಡುವೆ ಶಾಶ್ವತನಾದವ ತಾನಂತೆ ॥ ಕಳೆದುಳಿಯುವುದೇ ತಾನಂತೆ ಉಳಿಯುವ ಕಳೆಯುವರಿಲ್ಲಂತೆ ಕುಲಶೀಲಗಳೆಂಬ ಕೊಳೆಯಿಲ್ಲದೆ ನಿರ್‌- ಮಲದೊಳಗಿರುವನು ತಾನಂತೆ ॥

Thoughts & Reflections

0

No reflections shared yet. Be the first to share your thoughts!

Share your thought