← Back to home
ಸಿರಿ ರಾಮಕೃಷ್ಣ ಚರಣತಲದಿ
Author: ಸ್ವಾಮಿ ಪುರುಷೋತ್ತಮಾನಂದCategory: ಶ್ರೀರಾಮಕೃಷ್ಣRaaga: ಭೀಮಪಲಾಸೀTaala: ಏಕತಾಲ
ॐ
ಸಿರಿ ರಾಮಕೃಷ್ಣ ಚರಣತಲದಿ
ಶರಣೆನು ಮನವೇ ||
ಸಕಲ ತೀರ್ಥ ಸಕಲ ಶಾಸ್ತ್ರ
ಸಾರ ನೀನಹೆ |
ನಿಖಿಲ ಭಕುತ ಹೃದಯಕಮಲ
ತರಣಿ ನೀನಹೆ | ಎನುತ ||
ಪ್ರೇಮ ಭಕುತಿ ಕಲಿಯುಗದಲಿ
ತಾರಕ ಶಕುತಿ |
ಪ್ರೇಮರೂಪ ಪ್ರೇಮಾನಂದ
ಮಂಗಲ ಮೂರುತಿ | ಎನುತ ||
ದಕ್ಷಿಣೇಶ್ವರ ಲೀಲಾಕ್ಷೇತ್ರ
ಪರಮಪವಿತ್ರ |
ಮುಮುಕ್ಷು ಜನರ ಮುದದಿ ಕರೆದೆ
ನೀನೆ ಸುಮಿತ್ರ | ಎನುತ ||
Thoughts & Reflections
0No reflections shared yet. Be the first to share your thoughts!