Bhasaka
← Back to home

ಅನುವನರಿಯದೆ, ಆದಿಯ ವಿಚಾರಿಸದೆ

Author: ಅಲ್ಲಮ ಪ್ರಭುCategory: ಶ್ರೀಶಿವ
ಅನುವನರಿಯದೆ, ಆದಿಯ ವಿಚಾರಿಸದೆ ಅನಾದಿಯಲ್ಲಿ ತಾನೆರೆಂಬುದ ನೋಡದೆ ಸ್ತೋತ್ರವ ಮಾಡಿ ಫಲವೇನು ? 'ನಿಶ್ಶಬ್ದಂ ಬ್ರಹ್ಮ ಉಚ್ಯತೇ' ಎಂಬ ಘನವು ಹೊಗಳತೆಗೆ ಸಿಕ್ಕುವುದೆ ಎಲೆ ಮರುಳುಗಳಿರಾ ? ಅನಾದಿಯಲ್ಲಿ ಬಸವಣ್ಣನು ಏಳುನೂರೆಪ್ಪತ್ತು ಅಮರಗಣಂಗಳು ಸಹಿತ ಮತ್ರ್ಯಕ್ಕೆ ಬಂದನೊಂದು ಕಾರಣದಲ್ಲಿ. ಬಂದ ಮಣಿಹ ಪೂರೈಸಿತ್ತು-ಸಂದ ಪುರಾತರೆಲ್ಲರೂ ಕೇಳಿ, ಇಂದು ನೀವೆಲ್ಲರು ನಿಮ್ಮ ನೀವು ತಿಳಿದು ನೋಡಿ ನಿಜವನೈದುವುದು. ಇನ್ನು ನಮ್ಮ ಗುಹೇಶ್ವರಲಿಂಗಕ್ಕೆ ಸುರಾಳದ ಸುಳುಹಿಲ್ಲ

Thoughts & Reflections

0

No reflections shared yet. Be the first to share your thoughts!

Share your thought