Bhasaka
← Back to home

ರಂಗನೆಂಥವನೆಂಥವನೆಲೆ ತಂಗಿ

Category: ಶ್ರೀಕೃಷ್ಣRaaga: ಪರಜ್Taala: ಆದಿತಾಳ
ರಂಗನೆಂಥವನೆಂಥವನೆಲೆ ತಂಗಿ ರಂಗನಂತರಂಗ ಹಲವಂಗ ತಿಳಿಯದು ಬ್ರಹ್ಮಾದಿಗಳಿಗೆ ||ಪ|| ಆಗಮವ ತಂದಿಹನೆ- ರಂಗ ಬೇಗದಿ ಗಿರಿಯ ಪೊತ್ತಿಹನೆ ಮೂಗಿಂದ ಭೂಮಿಯನೆತ್ತಿದನೆ- ಕಂದ ಕೂಗಲು ಕಂಬದಿ ಬಂದ ಕಾಣಕ್ಕ ||1|| ಧರೆಯ ಈರಡಿ ಮಾಡಿದನೆ- ಭೂ ಸುರರಿಗೆ ದಾನವ ನೀಡಿದನೆ ನೆರೆದ ಕಪಿ ಹಿಂಡು ಕೂಡಿದನೆ- ಫಣಿ ಶಿರದಲಿ ಕುಣಿಕುಣಿದಾಡಿದನಕ್ಕ ||2|| ಉಟ್ಟದ್ದು ಬಿಟ್ಟು ತಾ ನಿಂತಿಹನೆ- ರಂಗ ದಿಟ್ಟಾದ ಕುದುರೆಯನೇರಿದನೆ ದುಷ್ಟರನೆಲ್ಲ ಅಳಿದಿಹನೆ- ನಮ್ಮ ಬಿಟ್ಟಾದಿಕೇಶವರಾಯ ಕಾಣಕ್ಕ ||3||

Thoughts & Reflections

0

No reflections shared yet. Be the first to share your thoughts!

Share your thought