Bhasaka
← Back to home

ತೋರೆ ಬೇಗನೆ ಸಖಿ

Author: ಕನಕದಾಸCategory: ಶ್ರೀಕೃಷ್ಣRaaga: ಕೇದಾರಗೌಳTaala: ಆದಿತಾಳ
ತೋರೆ ಬೇಗನೆ ಸಖಿ ತೋರ ಮುತ್ತಿನ ಹಾರ ಭಾರವಾಗಿದೆ ನನಗೆ ||ಪ|| ಈರೇಳು ಲೋಕವ ಪೊರೆವ ದಯಾನಿಧಿ ಬಾರನೇತಕೆ ಮನೆಗೆ ಹೇ ಸಖಿಯೆ ||ಅ|| ತರಣಿತನಯಸುತನ ಬಾಯೊಳನೃತವ ಭರದಿಂದ ನುಡಿಸಿದನ ತರಣಿಸುತನ ಬಾಣವೆರಗದಂದದಿ ರಥವ ಧರೆಗೆ ಒತ್ತಿದ ದೇವನ ತರಣಿಯ ಮರೆಮಾಡಿ ಶಿರವ ತರಿಯುವಂತೆ ನರಗೆ ಸೂಚಿಸಿದಾತನ ತರಣಿಯೊಡನೆ ಪಂಥವಾಡಿ ತಿರುಗಿದ ತರಳನಾಳಿದನ ತೋರಿಸೆ ಹೇ ಸಖಿಯೆ ||1|| ಗೋತ್ರಭೇದಿ ಸುತನ ಸುತನ ಸತಿಯ ಮಾತುಳನಾದವನ ಕತ್ತಲೆಯಲಿ ಪೋಗಿ ಕುತ್ತಿಟ್ಟವನ ಮೈಯ ಸುತ್ತಿ ಬಾಧಿಸುತಿಪ್ಪನ ತತ್ತ್ವವರಿತು ಸುತತ್ತ್ವ ಬೋಧಿಸಿ ಉತ್ತರವಿತ್ತವನ ಮುತ್ತಯ್ಯನ ತಾಯ ಪೆತ್ತ ದೇವನ ಎನ್ನ ಹತ್ತಿರ ಕರೆದು ತಾರೆ, ಹೇ ಸಖಿಯೆ ||2|| ವರಮುನಿಗಳು ಕೂಡಿ ಸರ್ವೋತ್ತಮನಾರೊ ಪರಿಶೋಧಿಸಬೇಕೆಂದು ಭರದಿಂದ ಭೃಗು ಮುನಿ ಬಂದು ಕೋಪಿಸೆ ಬೇಗ ಚರಣವನೊತ್ತಿದನ ಪರಿಪರಿಯಲಿ ದೇವ ಪರಮ ಭಕ್ತರ ಕಾವ ಸುರರಿಗಭಯವಿತ್ತನ ವರವೇಲಾಪುರದಾದಿ ಕೇಶವನ ಮರೆಯಲಾರೆನೆ ಮನದಿ- ಹೇ ಸಖಿಯೆ ||3||

Thoughts & Reflections

0

No reflections shared yet. Be the first to share your thoughts!

Share your thought