Bhasaka
← Back to home

ಹಲವು ಜೀವನವ ಒಂದೆಲೆ ನುಂಗಿತು

Author: ಕನಕದಾಸCategory: ಇತರೆRaaga: ಹಿಂದೂಸ್ತಾನಿ ಕಾಫಿTaala: ಮುಟ್ಟೆತಾಳ
ಹಲವು ಜೀವನವ ಒಂದೆಲೆ ನುಂಗಿತು- ಕಾಗಿ ನೆಲೆಯಾದಿ ಕೇಶವನು ಬಲ್ಲನೀ ಬೆಡಗ ||ಪ|| ಹರಿಯ ನುಂಗಿತು ಪರ ಬ್ರಹ್ಮನ ನುಂಗಿತು ಸುರರಿಗುಂಟಾದ ದೇವರ ನುಂಗಿತು ಉರಿಗಣ್ಣ ಶಿವನ ಒಂದೆಲೆ ನುಂಗಿತೆಲೊ ದೇವ ಹರಿಯ ಬಳಗವ ಒಂದೆಲೆ ನುಂಗಿತು ||1|| ಎಂಟು ಗಜವನು ನುಂಗಿ ಕಂಟಕರಯಿವರ ನುಂಗಿ ಉಂಟಾದ ಗಿರಿಯ ತಲೆಯ ನುಂಗಿತು ಕಂಟವ ಪಿಡಿದ ಬ್ರಹ್ಮನ ನುಂಗಿತೆಲೊ ದೇವ ಎಂಟಾರು ಲೋಕ ಒಂದೆಲೆ ನುಂಗಿತು ||2|| ಗಿಡವ ನುಂಗಿತು ಗಿಡದೊಡತೊಟ್ಟನು ನುಂಗಿತು ಗಿಡುವಿನ ತಾಯ ತಂದೆಯ ನುಂಗಿತು ಬೆಡಗ ಬಲ್ಲರೆ ಪೇಳಿ ದೇವ ಕನಕದಾಸ ಎ ನ್ನೊಡೆಯಾದಿಕೇಶವ ಬಲ್ಲನೀ ಬೆಡಗ ||3||

Thoughts & Reflections

0

No reflections shared yet. Be the first to share your thoughts!

Share your thought