Bhasaka
← Back to home

ಸದರವಲ್ಲವೊ ನಿಜಯೋಗ

Author: ಕನಕದಾಸCategory: ಇತರೆRaaga: ಕಾಫಿTaala: ಅಟ್ಟ
ಸದರವಲ್ಲವೊ ನಿಜಯೋಗ- ಸಚ್ಚಿದಾನಂದ ಸದಮಲ ಗುರುದಿಗಂಬರನ ಸಂಯೋಗ ||ಪ|| ಅಡಿಯನಂಬರ ಮಾಡದನಕ- ಅಗ್ನಿ ಕಿಡಿಯೆದ್ದು ಮೇಲಣ ಕೊಡುನುಕ್ಕದನಕ ಒಡಲೆರಡೊಂದಾಗದನಕ- ಅಲ್ಲಿ ಒಡಗೂಡಿ ಅಂಗನೆ ನುಡಿಗೇಳದನಕ ||1|| ನಾಡಿ ಹಲವು ಕಟ್ಟದನಕ ಬ್ರಹ್ಮ ನಾಡಿಯೊಳು ಪೊಕ್ಕು ಮುಳುಗಾಡದನಕ ಕಾಡುವ ಕಪಿ ಸಾಯದನಕ- ಸತ್ತ ಓಡಿನೊಳಗೆ ರಸ ತೊಟ್ಟಿಕ್ಕದನಕ ||2|| ಆದಿಕುಂಭ ಕಾಣದನಕ- ಅಲ್ಲಿ ಸಾಧಿಸಿ ಭೇದಿಸಿ ಸವಿಯುಣ್ಣದನಕ ಭೇದವು ಲಯವಾಗದನಕ- ಬಡ ದಾದಿಕೇಶವ ನಿಮ್ಮ ನೆಲೆಗಾಣದನಕ ||3||

Thoughts & Reflections

0

No reflections shared yet. Be the first to share your thoughts!

Share your thought