Bhasaka
← Back to home

ಪರಮಪುರುಷ ನೀ ನೆಲ್ಲಿಕಾಯಿ

Author: ಕನಕದಾಸCategory: ಇತರೆRaaga: ಮಧ್ಯಮಾವತಿTaala: ಮುಟ್ಟೆತಾಳ
ಪರಮಪುರುಷ ನೀ ನೆಲ್ಲಿಕಾಯಿ ||ಪ|| ಸರಸಿಯೊಳಗೆ ಕರಿ ಕೂಗಲುಕಾಯಿ ||ಅ|| ಹಿರಿದು ಮಾಡಿದ ಪಾಪ ನುಗ್ಗೆ ಕಾಯಿ ಹರಿ ನಿನ್ನ ಧ್ಯಾನ ಬಾಳೆಕಾಯಿ ಸರುವ ಜೀವರಿಗುಣಿಸಿಯುಂ ಬದನೆಕಾಯಿ ಅರಿಷಡ್ವರ್ಗಗಳೊದಗಿಲಿ ಕಾಯಿ ||1|| ಕ್ರೂರ ವ್ಯಾಧಿಗಳೆಲ್ಲ ಹೀರೆಕಾಯಿ ಘೋರ ದುಷ್ಕೃತಗಳು ಸೋರೆಕಾಯಿ ಭಾರತ ಕಥೆ ಕರ್ಣ ತುಪ್ಪಿರೆ ಕಾಯಿ ವಾರಿಜಾಕ್ಷನೆ ಗತಿಯೆಂದಿಪ್ಪೆ ಕಾಯಿ ||2|| ಮುರಹರ ನಿನ್ನವರು ಅವರೆಕಾಯಿ ಗುರು ಕರುಣಾಮೃತ ಉಣಸಿಕಾಯಿ ವರ ಭಕ್ತ ವತ್ಸಲನೆಂಬ ಹೆಸರಕಾಯಿ ಸಿರಿಯಾದಿ ಕೇಶವ ನಿನ್ನ ನಾಮ ಮೆಣಿಸೆಕಾಯಿ ||3||

Thoughts & Reflections

0

No reflections shared yet. Be the first to share your thoughts!

Share your thought