Bhasaka
← Back to home

ಏಳಯ್ಯ ಪಾರ್ವತೀ ರಮಣ ಪಾವನ ಚರಣ

Author: ಕನಕದಾಸCategory: ಶ್ರೀಶಿವRaaga: ಉದಯರಾಗ
ಏಳಯ್ಯ ಪಾರ್ವತೀ ರಮಣ ಪಾವನ ಚರಣ ಏಳಯ್ಯ ಫಣಿಕುಲಾಭರಣ ಪಾವಕ ನಯನ ಏಳಯ್ಯ ಬೆಳಗಾಯಿತು ||ಪ|| ಕಮಲ ಸಂಭವ ಮುಖ್ಯ ವಿಮಲ ವಿಶ್ವಾಮಿತ್ರ ಜಮದಗ್ನಿ ಕಶ್ಯಪ ವಶಿಷ್ಟ ಕಣ್ವಾದಿಗಳು ಸುಮನ ತತಿ ಬಂದು ಕಾದಿಹರು ಬಾಗಿಲೊಳೀಗ ಉಮೆಯರಸ ಒಲಿದುಪ್ಪವಡಿಸಯ್ಯ ಹರನೆ ||1|| ಇಂದ್ರ ದಿಕ್ಪಾಲಕರು ಕೂಡಿ ಒಂದೆಶೆಯೊಳಗೆ ವಂದಿಸುತ ನಾರದನು ಒಲಿದು ಗಾನವ ಪಾಡಿ ನಂದಿ ಭೃಂಗೀಶರು ನಾಟ್ಯವಾಡುತಲಿಹರು ಚಂದ್ರಧರ ಒಲಿದುಪ್ಪವಡಿಸಯ್ಯ ಹರಿಯೆ ||2|| ಗರುಡ ಗಂಧರ್ವ ಯಕ್ಷ ಕಿನ್ನರ ಕಿಂಪುರುಷ ಪರಮ ಪುರುಷರು ನಿನ್ನ ಪಾದವೇ ಗತಿಯೆಂದು ನಿರುತದಿಂ ಬಂದು ಓಲೈಸುತಿಹರು ತ್ರಿಪುರ ಹರನೆ ಪಂಪಾಪತಿಯೆ ಏಳಯ್ಯ ಬೆಳಗಾಯಿತು ||3||

Thoughts & Reflections

0

No reflections shared yet. Be the first to share your thoughts!

Share your thought