Bhasaka
← Back to home

ತಂಗದಿರನನಿಮಿಷ ತಾರಕೆಗಳು

Author: ಕನಕದಾಸCategory: ಶ್ರೀನರಸಿಂಹRaaga: ಭೂಪಾಲೀTaala: ಝಂಪೆತಾಳ
ತಂಗದಿರನನಿಮಿಷ ತಾರಕೆಗಳು ಮಸುಳಿಸೆ ಪ ತಂಗ ಪರ್ವತವನಡರಿ ಬಂದನು ಜಂಗಮಗಳೆದ್ದು ಜಯಜಯವೆನುತಿರೆ ನರ ಸಿಂಗನೊಲಿದುಪ್ಪವಡಿಸೊ ಹರಿಯೆ ||ಪ|| ಮೂಡುಗಡೆ ಮುಗಿಲು ಕೆಂಪಾದುದಡವಿಯ ತಾಮ್ರ ಚೂಡ ಕಾಳೋದರವು ಕೋಗಿಲೆಗಳುಲಿಯುತಿರೆ ನಾಡ ನಾನಾ ತಪೋಧನರು ತತ್ಕಾಲದಲಿ ಬೀಡ ಹೊರಹೊಂಟು ನಡೆದುದು ಕ್ರೋಡದಂಷ್ಪ್ರಜೆ ಕೃಷ್ಣವೇಣಿಯ ವರುಣೆ ಕೂಡಿ ಗಂಗಾಸ್ನಾನಗಳ ಮಾಡಲುದ್ಯೋಗಿಸಿದರಖಿಳ ಸಾಧುಗಳು ಅರಿವಿಭಾಡನೊಲಿದುಪ್ಪವಡಿಸೊ ಹರಿಯೆ ||1|| ಕುಗ್ಗಿದುವು ಕುಮುದ ಕುಂದ ಚಕೋರಾದಿಗಳು ಭುಜ ಹಿಗ್ಗಿದುವು ಚಕ್ರವಾಕಾಕಾಶದಲಿ ನೆರೆದು ಮೊಗ್ಗಿದುವು ಮಧುಪ ಸಂಕುಲ ಪುಷ್ಪವಾಟಿಯೊಳು ಜಗ್ಗಿದುವು ಜಡಿವ ತೆರದಿ ವರಕವಿಗಳೆದೆಯ ಮಧುರೋಕ್ತಿ ಎನಿಸಿ ನೆಗ್ಗಿದುವು ನಿಜಕುಲಾದ್ರಿಗಳಲಿ ಭಾನುವಿನ ಕಿರಣ ನುಗ್ಗಿ ಪೃಥ್ವಿಯೊಳು ಪಸರಿಸಿತು ಅನರ್ಘ್ಯನೊಲಿದುಪ್ಪ ವಡಿಸಯ್ಯ ಹರಿಯೆ ||2|| ಅಂಜನಾಸೂನು ಫಣಿಪತಿ ಗರುಡ ಪ್ರಹ್ಲಾದ ಕುಂಜರಾಧಿಪ ಬಲಿ ವಿಭೀಷಣ ಧ್ರುವ ರಂಜಕದ ಮೋಹಿನಿಯ ಗೆಲಿದ ರುಕಮಾಂಗದನು ಧನಂಜಯನಾತ್ಮಸಂಭವನ ಸಂಜಾತ ವಿದುರನಕ್ರೂರ ಮುಂಜಾವದಲಿ ಮುಮುಕ್ಷುಗಳು ಬಂದರು ದಯಾ ಪಂಜರವೊಲಿದುಪ್ಪವಡಿಸೊ ಹರಿಯೆ ||3|| ಶ್ವೇತಗಜ ಮಹಿಷ ಮಾನವ ನೆಗಳು ಏಣು ಸು ಜಾತಶ್ವ ವೃಷಭ ಮೇಷ ವಾಹನರು ಭೂತಳದೊಳಿದ್ದ ಮನುಮುನಿ ನಿರ್ಝರವ್ರಾತ ವಾಣೀಶನೊಡನೆ ಆತ ತನ್ನಮಳ ಹಯವನೇರಿಕೊಂಡು ಪ್ರ ಖ್ಯಾತ ದುಂದುಭಿಯ ರಭಸದೊಡನೆ ಚೇತ ನಾತುಮಕನೆ ನಿನ್ನಯ ಬಳಿಗೆ ಬಂದರು ವಿಶ್ವ ನಾಥನೊಲಿದುಪ್ಪವಡಿಸಯ್ಯ ಹರಿಯೆ ||4|| ತಾಳದಂಡಿಗೆ ಪಿಡಿದು ತುಂಬುರು ನಾರದರು ಭೂ ಪಾಳಿ ದೇಶಾಕ್ಷಿ ನಾರಾಯಣಿ ಗುಜ್ಜರಿ ಮಾಳವಿ ಶ್ರೀದೇವಿ ಗಾಂಧಾರಿ ಮಲಹರಿ ಸಾಳಗವು ಸೌರಾಷ್ಟ್ರ ಗುಂಡಕ್ರಿಯಾ ಲಲಿತ ಸುಳಾದಿಯಲಿ ನಾಮ ಕೀರ್ತನೆಗಳ ಪಾಡಿ ಮೇಳೈಸಿ ವಾದ್ಯ ನೃತ್ಯಗಳಾಡುತಿಹರು ಪಶು ಪಾಲನುಪ್ಪವಡಿಸೊ ಹರಿಯೆ ||5|| ಮೂಜಗದ ವ್ಯವಹಾರಿ ಮುಂಕೊಂಡು ಭರ ದ್ವಾಜ ರೋಮಷ ಅತ್ರಿ ಗಾರ್ಗೇಯ ಜಯ ಜಯಾಸನ ಶುಕ ಪರಾಶರ ರಿಪುಮಾನ್ಯ ಪ ಯೋಜಸಂಭವ ಸಂತತಿ ಭೋಜವರ ಭೃಗು ಕಪಿಲ ಮಾರಹರ ಗೌತ ಮಜಾನುಜ ಋಷಿ ಕೌಶಿಕ ವಶಿಷ್ಠ ಬೀಜಾಕ್ಷರದ ಕೀರ್ತನೆಗೈದು ಇನಕೋಟಿ ತೇಜನೊಲಿದುಪ್ಪವಡಿಸಯ್ಯ ಹರಿಯೆ ||6|| ವಾಗೀಶ ಬೃಹಸ್ಪತಿ ಹಜಾರದೊಳು ತಲೆ ದೂಗಿ ಶ್ರುತಿಶಾಸ್ತ್ರದಲಿ ಸ್ತುತಿಸಿಹರು ನಾಗಿಣಿಯರಮರಲೋಕದ ನರ್ತಕಿಯರು ಬಾಗಿಲೊಳು ಮಂಗಳೋದಕವಿಡಿದು ಕೆಲವರು ರಾಗಿಸುತ ರತ್ನದಾರತಿಯ ತಾಳ್ದರು ಕಾಗಿನೆಲೆಯಾದಿಕೇಶವರಾಯನಮರ ಸಂಯೋಗಿ ಒಲಿದುಪ್ಪವಡಿಸಯ್ಯ ಹರಿಯೆ ||7||

Thoughts & Reflections

0

No reflections shared yet. Be the first to share your thoughts!

Share your thought