Bhasaka
← Back to home

ಹನುಮನ ಮತವೇ

Author: ಪುರಂದರದಾಸCategory: ಶ್ರೀಹನುಮಂತRaaga: ಪಹಾಡೀTaala: ಕವಾಲಿ
ಹನುಮನ ಮತವೇ ಹರಿಯ ಮತವೊ ಹರಿಯ ಮತವೇ ಹನುಮನ ಮತವೊ || ಹನುಮನು ಒಲಿದರೆ ಹರಿ ತಾನೊಲಿವನು | ಹನುಮನು ಮುನಿದರೆ ಹರಿಯು ಮುನಿವನು || ಹನುಮನು ಒಲಿಯೆ ಸುಗ್ರೀವನು ಗೆದ್ದ| ಹನುಮನು ಮುನಿಯೆ ವಾಲಿಯು ಬಿದ್ದ|| ಹನುಮನು ಒಲಿಯೆ ವಿಭೀಷಣ ಗೆದ್ದ| ಹನುಮನು ಮುನಿಯೆ ರಾವಣ ಬಿದ್ದ|| ಹನುಮನು ಪುರಂದರವಿಟ್ಠಲನ ದಾಸ | ಪುರಂದರವಿಟ್ಠಲನು ಹನುಮನೊಳ್ ವಾಸ ||

Thoughts & Reflections

0

No reflections shared yet. Be the first to share your thoughts!

Share your thought