Bhasaka
← Back to home

ಹರಿದಾಸರ ಸಂಗ

Author: ಪುರಂದರದಾಸCategory: ಶ್ರೀಕೃಷ್ಣRaaga: ಆರಭಿTaala: ಆದಿತಾಳ
ಹರಿದಾಸರ ಸಂಗ ದೊರಕಿತು ಎನಗೀಗ | ವರಗುರು ಉಪದೇಶ ನೆರವಾಯ್ತು || ಮಾಯದ ಸಂಸಾರ ಮಮಕಾರ ತಗ್ಗಿತು | ತೋಯಜಾಕ್ಷನ ನಾಮ ಜಿಹ್ವೆಯೊಳ್ ನೆಲಸಿತು || ಏನೆಂದು ಹೇಳಲಿ ಆನಂದ ಸಂಭ್ರಮ ಆ ನಂದಗೋಪನ ಕಂದನ ಮಹಿಮೆಯ | ಎನ್ನ ವಂಶಗಳೆಲ್ಲ ಪಾವನವಾದವು ಶ್ರೀಪುರಂದರವಿಟ್ಠಲಯ್ಯ ದೊರಕಿದ ||

Thoughts & Reflections

0

No reflections shared yet. Be the first to share your thoughts!

Share your thought