← Back to home
ಕೊಟ್ಟುತೀರದು ನಿನ್ನ ಕರುಣೆಯ ಋಣವು
Author: ಪುರುಷೋತ್ತಮ ಕಾರಂತCategory: ಶ್ರೀದೇವಿRaaga: ದರಬಾರೀTaala: ಝಪತಾಳ
ॐ
ಕೊಟ್ಟುತೀರದು ನಿನ್ನ ಕರುಣೆಯ ಋಣವು
ತೆತ್ತು ಕಳೆವುದೆ ತಾಯೆ ವಾತ್ಸಲ್ಯ ಕಣವು॥
ದುಷ್ಟನಲಿ ಗುಣವರಸಿ ಇಷ್ಟವನು ಕರುಣಿಸುವೆ
ಶಿಷ್ಟಸಂಗದಿ ನಲಿಯಲೆಷ್ಟು ಪುಣ್ಯವೊ ನನಗೆ।
ಕಷ್ಟಕಾನನದೊಳಗೆ ಭಕುತಿದೀವಿಗೆಯಿತ್ತೆ
ನಷ್ಟಜೀವನದೊಳಗೆ ನಿನ್ನಿಷ್ಟಸುಧೆಯೆಂದೆ॥
ಹಣ್ಣುಹೂಧನಕನಕ ಎಷ್ಟುಕಾಣಿಕೆ ಕೊಡಲೆ
ನನ್ನಿಷ್ಟ ಸುಖಭಾವಗಳನೆಲ್ಲ ಬಿಡಲೆ।
ನಿನ್ನ ಕರುಣೆಯ ಫಲವು ಈ ನನ್ನ ಜೀವನವು
ನನ್ನನ್ನೇ ಕೊಡವೆನಿದೊ ನಿನ್ನ ಋಣಕೆ॥
Thoughts & Reflections
0No reflections shared yet. Be the first to share your thoughts!