Bhasaka
← Back to home

ಎತ್ತ ಹೋದರು ಸುತ್ತಲೆಲ್ಲೂ

Author: ವಚನವೇದCategory: ವೈರಾಗ್ಯRaaga: ಮಿಶ್ರ ಬೇಹಾಗ್Taala: ತೇವರಾ
ಎತ್ತ ಹೋದರು ಸುತ್ತಲೆಲ್ಲೂ ಆರಿಗಾರೂ ಇಲ್ಲ ಜಗದೊಳು ಎಂಬುದನು ನೀ ನೆನಪಿಡು | ಮಾಯೆಯೊಡ್ಡಿದ ಬಲೆಯೊಳಿದ್ದರು ತಾಯ ಪಾದದಿ ಮನವಿಡು || ಒಂದು ದಿನವೊ ಎರಡು ದಿನವೊ “ಸ್ವಾಮಿ, ಬುದ್ದೀ ” ಎಂದು ಜನಗಳು ಗೌರವದಿ ಬಳಿ ಸುಳಿವರು | ಮೃತ್ಯು ಬಂದೆಳೆವಾಗ ನಿನ್ನನು ಎಲ್ಲರೂ ಹಿಂದುಳಿವರು || ಯಾವ ಪ್ರಿಯತಮೆಯೊಲವಿಗಾಗಿಯೆ ಹಗಲು ಇರುಳೂ ಜೀವ ತೇದೆಯೊ ಬಾರಳವಳೂ ಜೊತಯೊಳು | ನೀನು ಸಾಯಲು ನಿನ್ನ ಶವವನು ಅಶುಭವೆಂದೇ ತಿಳಿವಳು ||

Thoughts & Reflections

0

No reflections shared yet. Be the first to share your thoughts!

Share your thought