Bhasaka
← Back to home

ಯೋಗಿ ಮನೆಗೆ ಬಂದ

Category: ಶ್ರೀಗುರುRaaga: ಮೋಹನTaala: ಆದಿತಾಳ
ಯೋಗಿ ಮನೆಗೆ ಬಂದ ಶ್ರೀ ಗುರುದೇವ ಮನೆಗೆ ಬಂದ | ಕಾಲಲಿ ಪಾದುಕೆ ಕೈಯಲಿ ದಂಡ ಬಾಲರವಿಯ ಕಳೆಯ || ಮಸ್ತಕದಲಿ ಜಟೆ ಶೋಭಿಸುತಲ್ಲಿ | ಕಸ್ತೂರಿ ತಿಲಕ ಚಂದನ ಹಣೆಯಲ್ಲಿ ವಿಸ್ತರ ನಗುಮುಖದ || ಜೋಲುತಿರಲು ಕೊರಳೊಳು ರುದ್ರಾಕ್ಷ | ಜೋಳಿಗೆ ಬಗಲಲಿ ತ್ರಿಲೋಕ ರಕ್ಷ ಕಾಷಾಯಾಂಬರದ || ಕುರುದ್ವೀಪದಿ ಕೃಷ್ಣೆಯ ತಟದಲ್ಲಿ | ಸರಸದಿ ವಾಸಿಪ ಶ್ರೀಪಾದಯೋಗಿ ಪರಮಪುರುಷ ನೃಹರಿ || ಭಕ್ತಕಾಮ ಕಲ್ಪದ್ರುಮನೀತ | ನಿತ್ಯಪೂರ್ಣ ಸಚ್ಚಿದಾತ್ಮ ದತ್ತ ಶಂಕರ ಗುರುರೂಪ ||

Thoughts & Reflections

0

No reflections shared yet. Be the first to share your thoughts!

Share your thought