Bhasaka
← Back to home

ಹಾಂಗೆ ಇರಬೇಕು

Author: ಪುರಂದರದಾಸCategory: ಶ್ರೀಕೃಷ್ಣRaaga: ಪಹಾಡೀTaala: ದಾದರಾ
ಹಾಂಗೆ ಇರಬೇಕು ಸಂಸಾರದಲ್ಲಿ ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ|| ಪಕ್ಷಿ ಅಂಗಳದಲ್ಲಿ ಬಂದು ಕೂತಂತೆ ಆ ಕ್ಷಣದಲ್ಲಿ ಹಾರಿ ಹೋದಂತೆ || ನಾನಾ ಪರಿಯಲಿ ಸಂತೆ ನೆರೆದಂತೆ ನಾನಾ ಪಂಥವ ಹಿಡಿದು ಹೋದಂತೆ || ಮಕ್ಕಳು ಆಡಿ ಮನೆ ಕಟ್ಟಿದಂತೆ ಆಟ ಸಾಕೆಂದು ಅಳಿಸಿ ಪೋದಂತೆ || ವಸತಿಕಾರನು ವಸತಿ ಕಂಡಂತೆ ಹೊತ್ತಾರೆದ್ದು ಹೊರಟು ಹೋದಂತೆ || ಸಂಸಾರಪಾಶವ ನೀನೇ ಬಿಡಿಸಯ್ಯಾ ಕಂಸಾರಿ ಪುರಂದರವಿಟ್ಠಲರಾಯ ||

Thoughts & Reflections

0

No reflections shared yet. Be the first to share your thoughts!

Share your thought